ಮುಖ್ಯ ವಿಷಯಕ್ಕೆ ಬಿಟ್ಟುಬಿಡಿ

ಪುಟವನ್ನು ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 18, 2024

Introduction to smart contracts

ಸ್ಮಾರ್ಟ್ ಕಾಂಟ್ರಾಕ್ಟ್ ಗಳು ಇಥಿರಿಯಮ್ ಅಪ್ಲಿಕೇಶನ್ ಪದರದ ಮೂಲಭೂತ ನಿರ್ಮಾಣ ಘಟಕಗಳಾಗಿವೆ. ಅವುಗಳು ಬ್ಲಾಕ್‌ಚೈನ್‌ನಲ್ಲಿ ಸಂಗ್ರಹವಾಗಿರುವ ಕಂಪ್ಯೂಟರ್ ಕಾರ್ಯಕ್ರಮಗಳಾಗಿವೆ, ಅವು "ಈಗಾಗಲೇ ಇದ್ದರೆ ಆಗ ಅದು" ಎಂಬ ತರ್ಕವನ್ನು ಅನುಸರಿಸುತ್ತವೆ ಮತ್ತು ಅದರ ಕೋಡ್‌ನಲ್ಲಿ ವ್ಯಾಖ್ಯಾನಿಸಲಾದ ನಿಯಮಗಳ ಪ್ರಕಾರ ಕಾರ್ಯಗತಗೊಳ್ಳುವ ಖಾತರಿ ನೀಡುತ್ತವೆ, ಅದು ರಚಿಸಿದ ನಂತರ ಬದಲಾಯಿಸಲಾಗುವುದಿಲ್ಲ.

ನಿಕ್ ಸ್ಜಾಬೊ "ಸ್ಮಾರ್ಟ್ ಕಾಂಟ್ರಾಕ್ಟ್" ಎಂಬ ಪದವನ್ನು ರಚಿಸಿದರು. 1994 ರಲ್ಲಿ, ಅವರು ಪರಿಕಲ್ಪನೆಗೆ ಮುನ್ನುಡಿ ಬರೆದರು(opens in a new tab) ಮತ್ತು 1996 ರಲ್ಲಿ ಅವರು ಸ್ಮಾರ್ಟ್ ಕಾಂಟ್ರಾಕ್ಟ್ ಗಳು ಏನು ಮಾಡಬಹುದು ಎಂಬುದರ ಪರಿಶೋಧನೆಯನ್ನು ಬರೆದರು(opens in a new tab).

ಸ್ಝಾಬೊ ಅವರು ನಂಬಲಾಗದ ಮಧ್ಯವರ್ತಿಗಳಿಲ್ಲದೆ ಒಟಪೋಟವಾಗಿ, ಗುಪ್ತ ಸಂಖ್ಯಾತ್ಮಕವಾಗಿ ಸುರಕ್ಷಿತ ಪ್ರಕ್ರಿಯೆಗಳನ್ನು ಬಳಸಿ ವಹಿವಾಟುಗಳು ಮತ್ತು ವ್ಯವಹಾರ ಕಾರ್ಯಗಳನ್ನು ನಡೆಯುವ ಒಂದು ಡಿಜಿಟಲ್ ಮಾರುಕಟ್ಟೆಯನ್ನು ಕಲ್ಪಿಸಿಕೊಂಡರು. ಎಥೆರಿಯಮ್ನಲ್ಲಿನ ಸ್ಮಾರ್ಟ್ ಕಾಂಟ್ರಾಕ್ಟ್ ಗಳು ಈ ದೃಷ್ಟಿಯನ್ನು ಕಾರ್ಯರೂಪಕ್ಕೆ ತಂದವು.

ಸಾಂಪ್ರದಾಯಿಕ ಒಪ್ಪಂದಗಳಲ್ಲಿ ನಂಬಿಕೆ

ಸಾಂಪ್ರದಾಯಿಕ ಒಪ್ಪಂದದ ಅತಿದೊಡ್ಡ ಸಮಸ್ಯೆಯೆಂದರೆ ವಿಶ್ವಾಸಾರ್ಹ ವ್ಯಕ್ತಿಗಳು ಒಪ್ಪಂದದ ಫಲಿತಾಂಶಗಳನ್ನು ಅನುಸರಿಸುವ ಅಗತ್ಯ.

ಒಂದು ಉದಾಹರಣೆ ಇಲ್ಲಿದೆ:

ಆಲಿಸ್ ಮತ್ತು ಬಾಬ್ ಬೈಸಿಕಲ್ ರೇಸ್ ನಡೆಸುತ್ತಿದ್ದಾರೆ. ಆಲಿಸ್ ತಾನು ಓಟವನ್ನು ಗೆಲ್ಲುತ್ತೇನೆ ಎಂದು ಬಾಬ್‍ಗೆ $10 ಬೆಟ್ಟಿಂಗ್ ಮಾಡುತ್ತಾಳೆ ಎಂದು ಹೇಳೋಣ. ಬಾಬ್ ಅವರು ವಿಜೇತರಾಗುತ್ತಾರೆ ಎಂಬ ವಿಶ್ವಾಸವಿದೆ ಮತ್ತು ಬೆಟ್ಟಿಂಗ್ ಗೆ ಒಪ್ಪುತ್ತಾರೆ. ಕೊನೆಯಲ್ಲಿ, ಆಲಿಸ್ ಬಾಬ್‍ಗಿಂತ ಮುಂಚಿತವಾಗಿ ರೇಸ್ ಅನ್ನು ಮುಗಿಸುತ್ತಾಳೆ ಮತ್ತು ಸ್ಪಷ್ಟ ವಿಜೇತಳಾಗಿದ್ದಾಳೆ. ಆದರೆ ಆಲಿಸ್ ಮೋಸ ಮಾಡಿರಬೇಕು ಎಂದು ಹೇಳಿ ಬಾಬ್ ಬೆಟ್ಟಿಂಗ್ ಪಾವತಿಸಲು ನಿರಾಕರಿಸುತ್ತಾನೆ.

ಈ ಸರಳ ಉದಾಹರಣೆಯು ಯಾವುದೇ ಸ್ಮಾರ್ಟ್ ಅಲ್ಲದ ಒಪ್ಪಂದದ ಸಮಸ್ಯೆಯನ್ನು ವಿವರಿಸುತ್ತದೆ. ಒಪ್ಪಂದದ ಷರತ್ತುಗಳು ಪೂರೈತಾದರೂ (ಉದಾಹರಣೆಗೆ, ನೀವು ಓಟದ ಗೆದ್ದಿದ್ದರೆ), ನೀವು ಇನ್ನೊಬ್ಬ ವ್ಯಕ್ತಿಯನ್ನು ಒಪ್ಪಂದವನ್ನು ಪೂರೈಸಲು (ಉದಾಹರಣೆಗೆ, ಜೂಜಿನ ಮೇಲಿನ ಪಾವತಿ) ನಂಬಬೇಕು.

A digital vending machine

ಸ್ಮಾರ್ಟ್ ಒಪ್ಪಂದಕ್ಕೆ ಒಂದು ಸರಳ ರೂಪಕವು ವಿತರಣಾ ಯಂತ್ರವಾಗಿದೆ, ಇದು ಸ್ಮಾರ್ಟ್ ಕಾಂಟ್ರಾಕ್ಟ್ ಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ - ನಿರ್ದಿಷ್ಟ ಒಳಹರಿವು ಪೂರ್ವನಿರ್ಧರಿತ ಔಟ್‌ಪುಟ್‌ಗಳನ್ನು ಖಾತರಿಪಡಿಸುತ್ತದೆ.

  • ನೀವು ಉತ್ಪನ್ನವನ್ನು ಆಯ್ಕೆ ಮಾಡಿದ್ದೀರಿ
  • ಮಾರಾಟ ಯಂತ್ರವು ಬೆಲೆಯನ್ನು ಪ್ರದರ್ಶಿಸುತ್ತದೆ
  • ನೀವು ಬೆಲೆಯನ್ನು ಪಾವತಿಸುತ್ತೀರಿ
  • ನೀವು ಸರಿಯಾದ ಮೊತ್ತವನ್ನು ಪಾವತಿಸಿದ್ದೀರಿ ಎಂದು ಮಾರಾಟ ಯಂತ್ರವು ಪರಿಶೀಲಿಸುತ್ತದೆ
  • ಮಾರಾಟ ಯಂತ್ರವು ನಿಮ್ಮ ಐಟಂ ಅನ್ನು ನಿಮಗೆ ನೀಡುತ್ತದೆ

ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದ ನಂತರವೇ ಮಾರಾಟ ಯಂತ್ರವು ನಿಮ್ಮ ಅಪೇಕ್ಷಿತ ಉತ್ಪನ್ನವನ್ನು ವಿತರಿಸುತ್ತದೆ. ನೀವು ಉತ್ಪನ್ನವನ್ನು ಆಯ್ಕೆ ಮಾಡದಿದ್ದರೆ ಅಥವಾ ಸಾಕಷ್ಟು ಹಣವನ್ನು ಸೇರಿಸದಿದ್ದರೆ, ಮಾರಾಟ ಯಂತ್ರವು ನಿಮ್ಮ ಉತ್ಪನ್ನವನ್ನು ನೀಡುವುದಿಲ್ಲ.

ಸ್ವಯಂಚಾಲಿತ ಕಾರ್ಯಗತಗೊಳಿಸುವಿಕೆ

ಸ್ಮಾರ್ಟ್ ಕಾಂಟ್ರಾಕ್ಟಿನ ಮುಖ್ಯ ಲಾಭವೆಂದರೆ, ಕೆಲವು ಷರತ್ತುಗಳು ಪೂರೈತಾದಾಗ ಅದು ನಿರ್ದಿಷ್ಟವಾದ ಕೋಡ್ ಅನ್ನು ನಿರ್ಣಾಯಕವಾಗಿ ಕಾರ್ಯಗತಗೊಳಿಸುತ್ತದೆ. ಮನುಷ್ಯನು ಫಲಿತಾಂಶವನ್ನು ವ್ಯಾಖ್ಯಾನಿಸಲು ಅಥವಾ ಮಾತುಕತೆ ನಡೆಸಲು ಕಾಯುವ ಅಗತ್ಯವಿಲ್ಲ. ಇದು ವಿಶ್ವಾಸಾರ್ಹ ಮಧ್ಯವರ್ತಿಗಳ ಅಗತ್ಯವನ್ನು ತೆಗೆದುಹಾಕುತ್ತದೆ.

ಉದಾಹರಣೆಗೆ, ನೀವು ಒಂದು ಸ್ಮಾರ್ಟ್ ಕಾಂಟ್ರಾಕ್ಟನ್ನು ಬರೆಯಬಹುದು, ಅದು ಒಬ್ಬ ಮಗುವಿನ ಹೆಸರಿನಲ್ಲಿ ಹಣವನ್ನು ಠೇವಣಿ ಮಾಡುತ್ತದೆ ಮತ್ತು ನಿರ್ದಿಷ್ಟ ದಿನಾಂಕದ ನಂತರ ಅವರು ಹಣವನ್ನು ಹಿಂಪಡೆಯಲು ಅನುಮತಿಸುತ್ತದೆ. ಅವರು ಆ ದಿನಾಂಕದ ಮೊದಲು ಹಿಂದೆ ಸರಿಯಲು ಪ್ರಯತ್ನಿಸಿದರೆ, ಸ್ಮಾರ್ಟ್ ಒಪ್ಪಂದವು ಕಾರ್ಯಗತಗೊಳಿಸುವುದಿಲ್ಲ. ಅಥವಾ ನೀವು ಡೀಲರ್ ಗೆ ಪಾವತಿಸಿದಾಗ ಕಾರಿನ ಶೀರ್ಷಿಕೆಯ ಡಿಜಿಟಲ್ ಆವೃತ್ತಿಯನ್ನು ಸ್ವಯಂಚಾಲಿತವಾಗಿ ನೀಡುವ ಒಪ್ಪಂದವನ್ನು ನೀವು ಬರೆಯಬಹುದು.

ಊಹಿಸಬಹುದಾದ ಫಲಿತಾಂಶಗಳು

ಸಾಂಪ್ರದಾಯಿಕ ಒಪ್ಪಂದಗಳು ಅಸ್ಪಷ್ಟವಾಗಿರುತ್ತವೆ ಏಕೆಂದರೆ ಅವುಗಳು ಅವುಗಳನ್ನು ಅರ್ಥೈಸಲು ಮತ್ತು ಕಾರ್ಯಗತಗೊಳಿಸಲು ಮನುಷ್ಯರನ್ನು ಅವಲಂಬಿಸಿವೆ. ಉದಾಹರಣೆಗೆ, ಇಬ್ಬರು ನ್ಯಾಯಾಧೀಶರು ಒಪ್ಪಂದವನ್ನು ವಿಭಿನ್ನವಾಗಿ ಅರ್ಥೈಸಬಹುದು, ಇದು ಅಸಮಂಜಸ ನಿರ್ಧಾರಗಳು ಮತ್ತು ಅಸಮಾನ ಫಲಿತಾಂಶಗಳಿಗೆ ಕಾರಣವಾಗಬಹುದು. ಸ್ಮಾರ್ಟ್ ಒಪ್ಪಂದಗಳು ಈ ಸಾಧ್ಯತೆಯನ್ನು ತೆಗೆದುಹಾಕುತ್ತವೆ. ಬದಲಾಗಿ, ಸ್ಮಾರ್ಟ್ ಕಾಂಟ್ರಾಕ್ಟ್ ಗಳು ಒಪ್ಪಂದದ ಕೋಡ್‌ನಲ್ಲಿ ಬರೆಯಲಾದ ಷರತ್ತುಗಳ ಆಧಾರದ ಮೇಲೆ ನಿಖರವಾಗಿ ಕಾರ್ಯಗತಗೊಳ್ಳುತ್ತವೆ. ಈ ನಿಖರತೆ ಎಂದರೆ ಅದೇ ಸಂದರ್ಭಗಳನ್ನು ನೀಡಿದರೆ, ಸ್ಮಾರ್ಟ್ ಒಪ್ಪಂದವು ಅದೇ ಫಲಿತಾಂಶವನ್ನು ನೀಡುತ್ತದೆ.

ಸಾರ್ವಜನಿಕ ದಾಖಲೆ

ಸ್ಮಾರ್ಟ್ ಒಪ್ಪಂದಗಳು ಲೆಕ್ಕಪರಿಶೋಧನೆ ಮತ್ತು ಟ್ರ್ಯಾಕಿಂಗ್ ಗೆ ಉಪಯುಕ್ತವಾಗಿವೆ. ಇಥಿರಿಯಮ್ ಸ್ಮಾರ್ಟ್ ಕಾಂಟ್ರಾಕ್ಟ್ ಗಳು ಸಾರ್ವಜನಿಕ ಬ್ಲಾಕ್‍ಚೈನ್‍ನಲ್ಲಿರುವುದರಿಂದ, ಯಾರಾದರೂ ಆಸ್ತಿ ವರ್ಗಾವಣೆ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ತಕ್ಷಣ ಟ್ರ್ಯಾಕ್ ಮಾಡಬಹುದು. ಉದಾಹರಣೆಗೆ, ನಿಮ್ಮ ವಿಳಾಸಕ್ಕೆ ಯಾರಾದರೂ ಹಣವನ್ನು ಕಳುಹಿಸಿದ್ದಾರೆಯೇ ಎಂದು ನೀವು ಪರಿಶೀಲಿಸಬಹುದು.

ಗೌಪ್ಯತೆ ರಕ್ಷಣೆ

ಸ್ಮಾರ್ಟ್ ಕಾಂಟ್ರಾಕ್ಟ್ ಗಳು ನಿಮ್ಮ ಗೌಪ್ಯತೆಯನ್ನು ಸಹ ರಕ್ಷಿಸುತ್ತವೆ. ಇಥಿರಿಯಮ್ ಒಂದು ಗುಪ್ತನಾಮದ ನೆಟ್‌ವರ್ಕ್ ಆಗಿರುವುದರಿಂದ (ನಿಮ್ಮ ವಹಿವಾಟುಗಳು ಅನನ್ಯ ಕ್ರಿಪ್ಟೋಗ್ರಾಫಿಕ್ ವಿಳಾಸಕ್ಕೆ ಸಾರ್ವಜನಿಕವಾಗಿ ಸಂಬಂಧಿಸಿವೆ, ನಿಮ್ಮ ಗುರುತನ್ನು ಅಲ್ಲ), ನೀವು ವೀಕ್ಷಕರಿಂದ ನಿಮ್ಮ ಗೌಪ್ಯತೆಯನ್ನು ರಕ್ಷಿಸಬಹುದು.

ಗೋಚರಿಸುವ ಪದಗಳು

ಅಂತಿಮವಾಗಿ, ಸಾಂಪ್ರದಾಯಿಕ ಒಪ್ಪಂದಗಳಂತೆ, ನೀವು ಸಹಿ ಮಾಡುವ ಮೊದಲು ಸ್ಮಾರ್ಟ್ ಕಾಂಟ್ರಾಕ್ಟ್ ನಲ್ಲಿ ಏನಿದೆ ಎಂದು ನೀವು ಪರಿಶೀಲಿಸಬಹುದು (ಅಥವಾ ಅದರೊಂದಿಗೆ ಸಂವಹನ ನಡೆಸಬಹುದು). ಸ್ಮಾರ್ಟ್ ಕಾಂಟ್ರಾಕ್ಟ್ ನ ಪಾರದರ್ಶಕತೆಯು ಯಾರಾದರೂ ಅದನ್ನು ಪರಿಶೀಲಿಸಬಹುದು ಎಂದು ಖಾತರಿಪಡಿಸುತ್ತದೆ.

ಸ್ಮಾರ್ಟ್ ಕಾಂಟ್ರಾಕ್ಟ್ ನ ಬಳಕೆ ಪ್ರಕರಣಗಳು

ಸ್ಮಾರ್ಟ್ ಕಾಂಟ್ರಾಕ್ಟ್ ಗಳು ಮೂಲಭೂತವಾಗಿ ಕಂಪ್ಯೂಟರ್ ಪ್ರೋಗ್ರಾಂಗಳು ಮಾಡಬಹುದಾದ ಯಾವುದೇ ಕೆಲಸವನ್ನು ಮಾಡಬಹುದು.

ಅವರು ಗಣನೆಗಳನ್ನು ಮಾಡಬಹುದು, ಕರೆನ್ಸಿಯನ್ನು ರಚಿಸಬಹುದು, ಡೇಟಾವನ್ನು ಸಂಗ್ರಹಿಸಬಹುದು, NFT ಎನ್ಎಫ್ಟಿಗಳನ್ನು ಮಿಂಟ್ ಮಾಡಬಹುದು, ಸಂವಹನಗಳನ್ನು ಕಳುಹಿಸಬಹುದು ಮತ್ತು ಗ್ರಾಫಿಕ್ಸ್ ಅನ್ನು ಸಹ ರಚಿಸಬಹುದು. ಕೆಲವು ಜನಪ್ರಿಯ, ನೈಜ-ಪ್ರಪಂಚದ ಉದಾಹರಣೆಗಳು ಇಲ್ಲಿವೆ:

  • ಸ್ಟೇಬಲ್‍ಕಾಯಿನ್‍‍ಗಳು
  • ಅನನ್ಯ ಡಿಜಿಟಲ್ ಸ್ವತ್ತುಗಳನ್ನು ರಚಿಸುವುದು ಮತ್ತು ವಿತರಿಸುವುದು
  • ಸ್ವಯಂಚಾಲಿತ, ಮುಕ್ತ ಕರೆನ್ಸಿ ವಿನಿಮಯ
  • ವಿಕೇಂದ್ರೀಕೃತ ಗೇಮಿಂಗ್
  • ಸ್ವಯಂಚಾಲಿತವಾಗಿ ಪಾವತಿಸುವ ವಿಮಾ ಪಾಲಿಸಿ(opens in a new tab)
  • ಕಸ್ಟಮೈಸ್ ಮಾಡಿದ, ಪರಸ್ಪರ ಕಾರ್ಯಸಾಧ್ಯವಾದ ಕರೆನ್ಸಿಗಳನ್ನು ರಚಿಸಲು ಜನರಿಗೆ ಅನುಮತಿಸುವ ಮಾನದಂಡ

More of a visual learner?

ಸ್ಮಾರ್ಟ್ ಕಾಂಟ್ರಾಕ್ಟ್ ಗಳನ್ನು ಫೈನ್ಮ್ಯಾಟಿಕ್ಸ್ ವಿವರಿಸುವುದನ್ನು ವೀಕ್ಷಿಸಿ:

Further reading

ಈ ಲೇಖನದಿಂದ ಸಹಾಯವಾಗಿದೆಯೇ?